ಅಲ್ಪಾವಧಿ ಸಮಸ್ಯೆಗಳ ಕುರಿತು ಬಹುಪಾಲು ಸಾರ್ವಜನಿಕ ಚರ್ಚೆಗಳು ನಡೆಯತ್ತವೆ ಎಂದು ವಿಷಾದ ವ್ಯಕ್ತಪಡಿಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರು, ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣದ ಮಹತ್ವವನ್ನು ರಾಜಕೀಯ ನಾಯಕರು ಅರಿತುಕೊಳ್ಳಬೇಕು ಎಂದು ಹೇಳಿದ್ದಾರೆ.
ಅವರು ಮದ್ರಾಸ್ ವಿಶ್ವವಿದ್ಯಾನಿಲಯದ 150ನೇ ವರ್ಷೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣದ ಕೇಂದ್ರೀಯ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವಂತೆ ತಾನು ಎಲ್ಲ ರಾಜಕೀಯ ನಾಯಕರನ್ನು ಒತ್ತಾಯಿಸುವುದಾಗಿ ಅವರು ಈ ಸಂದರ್ಭದಲ್ಲಿ ನುಡಿದರು. ಅವಶಕಾಶದ ವಿಸ್ತರಣೆಯು ಶಿಕ್ಷಣದ ಗುಣಮಟ್ಟ ಮತ್ತು ಫಲಿತಾಂಶದೊಂದಿಗೆ ಯಾವುದೇ ರಾಜಿ ಮಾಡಿಕೊಳ್ಳಕೂಡದು ಎಂದೂ ಅವರು ನುಡಿದರು.
ಎಲ್ಲಾ ಅರ್ಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಲಭಿಸುವಂತಾಗಬೇಕು ಎಂದು ನುಡಿದ ಪ್ರಧಾನಿ, ಸಮಾಜದ ಪರಿಮಿತ ಮಂದಿಯು ಅಭಿವೃದ್ದಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳದ ವಿನಹ ಭಾರತವು ತನ್ನ ಸಂಪೂರ್ಣ ಅಭಿವೃದ್ಧಿ ಸಾಮರ್ಥ್ಯವನ್ನು ಅರಿತುಕೊಳ್ಳದು ಎಂದು ನುಡಿದರು. ಶಿಕ್ಷಣವು ಈ ಗುರಿಯನ್ನು ತಲುಪುವಂತಾಗಬೇಕು ಎಂದು ಅವರು ನುಡಿದರು.
|