ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ > ಎನ್ಎಸ್‌ಜಿ ಭಯ ದೂರಗೊಳಿಸಲು ಭಾರತ ಯತ್ನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎನ್ಎಸ್‌ಜಿ ಭಯ ದೂರಗೊಳಿಸಲು ಭಾರತ ಯತ್ನ
ಅಣು ಪೂರೈಕೆ ಸಮೂಹದ ಭೀತಿಯನ್ನು ದೂರಗೊಳಿಸಲು ಭಾರತವು ಶುಕ್ರವಾರ ಸ್ವಯಂ ಹೇಳಿಕೆಯೊಂದನ್ನು ನೀಡಿದೆ.

ವಿದಳನ ಸಾಮಾಗ್ರಿ ನಿಯಂತ್ರಣ ಒಪ್ಪಂದ(ಎಫ್ಎಂಒಟಿ)ವನ್ನು ಅಂತಿಮಗೊಳಿಸಲು ಭಾರತವು ಬದ್ಧವಾಗಿದೆ ಎಂದು ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಅಲ್ಲದೆ, ಭಾರತವು ಅಣುವಸ್ತುಗಳ ಪ್ರಸರಣ ಮೂಲವಾಗಲಾರದು ಎಂದೂ ಅವರು ಹೇಳಿದ್ದಾರೆ.

ಅಲ್ಲದೆ ಭಾರತವು ಅಣು ಪರೀಕ್ಷೆಯ ಕುರಿತ ತನ್ನ ಏಕಪಕ್ಷೀಯ ತಾತ್ಕಾಲಿಕ ಸ್ತಂಭನಕ್ಕೆಯೂ ಬದ್ಧವಾಗಿದೆ ಮತ್ತು ಭಾರತವು ಎಂದಿಗೂ ಪ್ರಥಮವಾಗಿ ಅಣ್ವಸ್ತ್ರಗಳನ್ನು ಬಳಸದು ಎಂಬ ತನ್ನ ನೀತಿಗೆ ಬದ್ಧವಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಅಣುವ್ಯಾಪಾರಕ್ಕಾಗಿ ಭಾರತಕ್ಕೆ ವಿನಾಯಿತಿ ನೀಡುವ ನಿರ್ಧಾರದ ಕುರಿತು ಅಣು ಪೂರೈಕೆ ರಾಷ್ಟ್ರಗಳ ಸಮೂಹದ ಕೆಲವು ಸದಸ್ಯ ರಾಷ್ಟ್ರಗಳಿಗಿರುವ ಅನುಮಾನಗಳನ್ನು ತೊಡೆದು ಹಾಕುವ ನಿಟ್ಟಿನಿಂದ ಭಾರತದ ಹಿರಿಯ ಅಧಿಕಾರಿಗಳು ಇಂತಹ ರಾಷ್ಟ್ರಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಅವರ ಮನಒಲಿಸಲು ಪ್ರಯತ್ನಿಸಿದ್ದಾರೆ.

ಭಾರತಕ್ಕೆ ವಿನಾಯಿತಿ ನೀಡುವ ಪರವಾಗಿ ಎನ್‌ಎಸ್‌ಜಿಯು ತೀರ್ಮಾನ ಕೈಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದ್ದು, ಭಾರತದ ಮೂವತ್ತು ವರ್ಷಗಳ ಪ್ರತ್ಯೇಕತೆ ಅಂತ್ಯಗೊಳ್ಳಲಿದೆ ಎಂದು ನಿರಿಕ್ಷೀಸಲಾಗಿದೆ.
ಮತ್ತಷ್ಟು
ಶಿಕ್ಷಣದ ಮಹತ್ವವನ್ನು ರಾಜಕಾರಣಿಗಳು ಅರಿಯಲಿ: ಸಿಂಗ್
ಒರಿಸ್ಸಾ: ಮಾನವ ಜೀವಕ್ಕೆ ವೈವಿಧ್ಯಮಯ 'ದರಪಟ್ಟಿ'
ಪಕ್ಷೇತರರ ಕುರಿತು ಕೋಡಾ ಪುಸ್ತಕ ಬರೆಯುತ್ತಾರಂತೆ!
ಎನ್‌ಎಸ್‌ಜಿಯಿಂದ ಭಾರತಕ್ಕೆ ವಿನಾಯಿತಿ?
ದಾಖಲೆಯ ಅಂಶಗಳನ್ನು ಬಚ್ಚಿಟ್ಟಿಲ್ಲ: ಅಮೆರಿಕ
ಆರ್‌ಎಸ್‌ಎಸ್-ಭಜರಂಗದಳ ನಿಷೇಧಿಸಿ: ಪಾಸ್ವಾನ್