ತೀವ್ರ ರಾಜಕೀಯ ಒತ್ತಡಕ್ಕೆ ಸಿಲುಕಿದ ಎನ್‌ಸಿಪಿ ಪಕ್ಷವು, ಅವಳಿ ಕೊಲೆ ಪ್ರಕರಣದ ಆರೋಪಿಯಾಗಿರುವ ಪದಂಸಿನ್ನಾ ಪಾಟೀಲ್ ಅವರನ್ನು ಅಮಾನತ್ತುಗೊಳಿಸಿದೆ. ಪಾಟೀಲ್ ಅವರು ನಿರಪರಾಧಿ ಎಂದು ಸಾಬೀತಾದರೆ ಅವರ ಅಮಾನತ್ತನ್ನು ಹಿಂಪಡೆಯಲಾಗುವುದು ಎಂದು ಪಕ್ಷ ಹೇಳಿದೆ.ಪಕ್ಷದ ಶಿಸ್ತು ಸಮಿತಿಯು ಬುಧವಾರ ಸಭೆ ಸೇರಿದ್ದು, ಮಹಾರಾಷ್ಟ್ರದ ಓಸ್ಮಾನಾಬಾದ್ ಸಂಸದರಾಗಿರುವ ಪಾಟೀಲರನ್ನು ಪಕ್ಷದ ಸದಸ್ಯತ್ವದಿಂದ ಅಮಾನತ್ತುಗೊಳಿಸಲು ನಿರ್ಧರಿಸಿತು ಎಂದು ಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಕಾಂಗ್ರೆಸ್ ನಾಯಕ ಪವನ್‌ರಾಜ್ ನಿಂಬಾಳ್ಕರ್ ಹಾಗೂ ಅವರ ಕಾರುಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಟೀಲರನ್ನು ಸಿಬಿಐ ಮೂರು ದಿನಗಳ ಹಿಂದೆ ಬಂಧಿಸಿತ್ತು. ಮೂರು ವರ್ಷಗಳ ಹಿಂದೆ ಈ ಕೊಲೆ ನಡೆದಿತ್ತು. ಎನ್‌ಸಿಪಿ ಪಾಟೀಲರನ್ನು ರಕ್ಷಿಸಲು ಯತ್ನಿಸುತ್ತಿದೆ ಎಂಬುದಾಗಿ ಆರೋಪಿಸಿದ್ದ ವಿರೋಧಿ ಪಕ್ಷಗಳು ಕ್ರಮಕೈಗೊಳ್ಳಲು ಒತ್ತಾಯಿಸಿದ್ದವು. ಹತ್ಯೆ ಪ್ರಕರಣ: ಎನ್‌ಸಿಪಿ ಸಂಸದ ಪಾಟೀಲ್ ಸೆರೆ |