ಮಸೀದಿ ಹೊರಗೆ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿಯೊಬ್ಬನ ಚೀಲದಲ್ಲಿ 14 ಲಕ್ಷ ರೂಪಾಯಿ ದೊರೆತಿರುವುದು ಅಚ್ಚರಿ ಮೂಡಿಸಿದೆ.
ಕೇರಳದ ಕೋಯಿಕ್ಕೋಡ್‌ನ ಕುಟ್ಟಿಕ್ಕತ್ತೂರ್‌ನ ಜಮಾತ್ ಮಸೀದಿಯೊಂದರ ಸಮೀಪ ಭಿಕ್ಷೆ ಬೇಡುತ್ತಿದ್ದ ಅಬ್ದುಲ್ ಗಲಿ ಎಂಬಾತ 80 ಸಾವಿರ ರೂಪಾಯಿ ನಗದು ಹಣ ಹೊಂದಿದ್ದ ಮತ್ತು ಆತನ ಚೀಲದಲ್ಲಿ 13 ಲಕ್ಷ ರೂ. ಮೊತ್ತದ ಅಂಚೆ ಕಚೇರಿ ಠೇವಣಿಯ ದಾಖಲೆ ಪತ್ರಗಳಿದ್ದವು ಎಂದು ವರದಿಯಾಗಿದೆ.
ತಾನು 'ಪ್ರಾಮಾಣಿಕ'ವಾಗಿ ದುಡಿದು ಸಂಪಾದಿಸಿದ ಹಣವಿದು ಎಂದು ಸುಮಾರು 70 ವರ್ಷ ಪ್ರಾಯದ ಈತ ಪೊಲೀಸರಲ್ಲಿ ಹೇಳಿಕೊಂಡಿದ್ದಾನೆ. ಸುಮಾರು ಮೂರು ದಶಕಗಳ ಕಾಲ ಭಿಕ್ಷೆ ಬೇಡಿ ಈ ಹಣ ಸಂಗ್ರಹಿಸಿರುವುದಾಗಿಯೂ ಆತ ತಿಳಿಸಿದ್ದಾನೆ. ತನಿಖೆ ಮುಂದುವರಿಯುತ್ತಿದೆ. ಈತ ಮೂಲತಃ ತಮಿಳುನಾಡಿನ ತೂತುಕುಡಿಯವನು ಎಂದು ತಿಳಿದುಬಂದಿದೆ. |