ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಯಡ್ಡಿ ವಿರುದ್ಧ ಶೆಟ್ಟರ್ ಅಕ್ರೋಶ
ಏಳು ದಿನಗಳ ಮುಖ್ಯಮಂತ್ರಿಯೆಂದು ಹೆಸರು ಪಡೆದ ಯಡಿಯೂರಪ್ಪ ಅವರು ಸಾರ್ವಜನಿಕರ ಗಳಿಸುವ ನಿಟ್ಟಿನಲ್ಲಿ ಜನಜಾಗೃತಿಗೆ ಮುಂದಾಗುತ್ತಿದ್ದರೆ, ಇತ್ತ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದಲ್ಲಿ ಅಸಮಾಧಾನದ ಹೊಗೆ ಪಕ್ಷದ ಹಿರಿಯ ಮುಖಂಡರಾದ ಕೆ.ಎಸ್ ಈಶ್ವರಪ್ಪ, ಜಗದೀಶ್ ಶೆಟ್ಟರ ಅವರಿಂದ ರಾಷ್ಟ್ರೀಯ ಮುಖಂಡರಿಗೆ ಹೊರಟಿದೆ.

ಮಂಗಳವಾರ ದಿಡೀರ್ ದೆಹಲಿಗೆ ತೆರಳಿದ ಹಿರಿಯ ಮುಖಂಡರಾದ ಕೆ. ಎಸ್ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಮತ್ತು ಡಿ.ಎಚ್. ಶಂಕರಮೂರ್ತಿ ಅವರು ಪಕ್ಷದ ರಾಷ್ಟ್ರೀಯ ಮುಖಂಡರನ್ನು ಭೇಟಿ ಮಾಡಿ, ಯಡಿಯೂರಪ್ಪ ವಿರುದ್ಧ ಕಾರ್ಯಕರ್ತರಲ್ಲಿ ಕಂಡುಬಂದಿರುವ ಅಸಮಾಧಾನವನ್ನು ಮನದಟ್ಟು ಮಾಡಿಕೊಟ್ಟರು ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.

ಲೋಕಸಭೆಯಲ್ಲಿ ಎಲ್. ಕೆ ಅಡ್ವಾಣಿ, ರಾಜನಾಥ್ ಸಿಂಗ್, ಮತ್ತು ಕರ್ನಾಟಕದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತ್ ಸಿನ್ಹಾ ಅವರನ್ನು ಭೇಟಿ ಮಾಡಿ ಎರಡು ತಿಂಗಳ ಅವಧಿಯಲ್ಲಿ ನಡೆದ ರಾಜ್ಯ ರಾಜಕೀಯದ ಬೆಳವಣಿಗೆಗಳಲ್ಲಿ ಯಡಿಯೂರಪ್ಪ ಅವರು ತಮ್ಮ ಸ್ವಂತ ರಾಜಕೀಯ ಗುರಿ ಸಾಧಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಹೊರತು ಪಕ್ಷದ ಹಿತವನ್ನು ಈ ಸಮಯದಲ್ಲಿ ಗಮನಿಸಿಲ್ಲ ಎಂದು ಆರೋಪಿಸಿದ್ದಾರೆಂದು ತಿಳಿದು ಬಂದಿದೆ.

ಕೇಂದ್ರೀಯ ನಾಯಕರಲ್ಲಿ ಮಾಡಿರುವ ಆರೋಪಗಳಲ್ಲಿ ಯಡಿಯೂರಪ್ಪ ಅಧಿಕಾರ ಲಾಲಸೆಯಿಂದ ಪಕ್ಷಕ್ಕೆ ದುಡಿದ ನಾಯಕರನ್ನು ಮರೆತು ತಮ್ಮ ಪಟಾಲಂ ಕಟ್ಟಿಕೊಂಡು ತಿರುಗಿದ್ದಾರೆ. ಅವರ ಈ ನಡತೆಯಿಂದ ಪಕ್ಷಕ್ಕೆ ತೀವ್ರ ಹಾನಿಯಾಗಲಿದೆ. ಯಾತ್ರೆ, ಜಾಗೃತಿಗಳ ಕುರಿತು ಮಾತನಾಡಿರುವ ನಾಯಕರು ಸಭೆ ಸಮಾರಂಭಗಳಲ್ಲಿ ಯಡಿಯೂರಪ್ಪ ಅವರಿಗಿಂತ ಹೆಚ್ಚಿನ ಜನರನ್ನು ಸೇರಿಸುವ ಸಾಮರ್ಥ್ಯ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಇದ್ದು, ಇಂತಹ ಸಭೆಗಳಿಂದ ಏನೂ ಮಾಡಲಿಕ್ಕಾಗುವುದಿಲ್ಲ ಎಂದು ಜಾಗೃತಿ ಯಾತ್ರೆಯ ಕುರಿತು ಮಾತನಾಡಿದ್ದಾರೆ.

ಯಡಿಯೂರಪ್ಪ ಅವರದು ಅಧಿಕಾರ ದಾಹ ಎಂದು ಹೇಳಿರುವ ಅವರುಗಳು ಅಧಿಕಾರ ಹಿಡಿಯುವ ಏಕೈಕ ಉದ್ದೇಶದಿಂದ ಎರಡು ಬಾರಿ ಧರ್ಮ ಯಾತ್ರೆಯನ್ನು ಮೊಟಕುಗೊಳಿಸಿದ್ದಾರೆ. ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರು ರಾಜಕೀಯವಾಗಿ ಮೇಲೆ ಬರಲು ಶಂಕರಮೂರ್ತಿ ಕಾರಣ. ಅವರನ್ನು ಬಿಟ್ಟು ರೇಣುಕಾಚಾರ್ಯ ಅವರಂತವರನ್ನು ಕಾರ್ಯಕ್ರಮಗಳಲ್ಲಿ ಇಟ್ಟುಕೊಂಡರೆ ಪಕ್ಷದ ಗತಿ ಏನಾಗುತ್ತದೆ.

ಇದು ಅಲ್ಲದೇ ಸರಕಾರ ಪತನಗೊಂಡ ದೆಹಲಿಯಲ್ಲಿ ಕರೆದಿದ್ದ ಪತ್ರಿಕಾಗೊಷ್ಠಿಯಲ್ಲಿ ಕೂಡ ಚುನಾವಣೆಯಲ್ಲಿನ ನಾಯಕತ್ವದ ವಿಷಯಕ್ಕೆ ಸಂಬಂಧಿಸಿದಂತೆ ಸಿನ್ಹಾ ಅವರೊಂದಿಗೆ ವಾಗ್ಯುದ್ಧ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಮತ್ತಷ್ಟು
ಮತ್ತೆ ನಾಡಗೀತೆ ವಿವಾದ
ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಪುತ್ತಿಗೆ ಶ್ರಿಗಳು
ಬುಧವಾರ ಜೆಡಿಎಸ್ ಬಂಡಾಯ ಸಭೆ
ವಿಧಾನಸಭೆ ವಿಸರ್ಜನೆಗೆ 3 ಪಕ್ಷಗಳ ಸ್ವಾಗತ
ಬಿರುಸುಗೊಂಡ ರಾಜಕೀಯ ಚಟುವಟಿಕೆ
ಪಕ್ಷ ಬೇಡದವರು ಬಿಟ್ಟು ಹೋಗಬಹುದು: ದೇವೇಗೌಡ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com