ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಹಳೇ ಒಳಜಗಳಕ್ಕೆ ಮತ್ತೆ ಮರಳಿತು ಬಿಜೆಪಿ...
ಮನೆಯ ಹೊರಗಡೆ ಮಹತ್ವಾಕಾಂಕ್ಷೀ ಜನಜಾಗೃತಿ ಯಾತ್ರೆ ನಡೆಯುತ್ತಿದ್ದರೆ, ಮನೆಯ ಒಳಗಡೆ ಭಿನ್ನಮತದ ಹೊಗೆ ಹುಟ್ಟಿಕೊಂಡಿರುವುದು ಬಿಜೆಪಿ ವರಿಷ್ಠರ ನಿದ್ರೆಗೆಡಿಸಿದೆ. ಸರಕಾರ ರಚನೆಯಾಗುತ್ತದೆ ಎಂದಾದಾಗ ಎಲ್ಲವೂ ಸರಿ ಇದೆ ಎಂಬಂತೆ ಒಗ್ಗಟ್ಟು ಪ್ರದರ್ಶಿಸಿದ್ದ ಬಿಜೆಪಿಯಲ್ಲಿ, ಇದೀಗ ಸರಕಾರ ರಚಿಸಲಾರದೆ ಕೈಸುಟ್ಟುಕೊಂಡ ಬಳಿಕ ಮತ್ತದೇ ಆಂತರಿಕ ಭಿನ್ನಮತ ಕಾಣಿಸಿಕೊಳ್ಳತೊಡಗಿದೆ.

ತಮ್ಮ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸಿಗದೆ ಆದ ಅನ್ಯಾಯವನ್ನು ಜನರ ಮುಂದೆ ತೋಡಿಕೊಳ್ಳಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಒಂದೆಡೆ ಜನಜಾಗೃತಿ ಯಾತ್ರೆಯನ್ನು ಹಮ್ಮಿಕೊಂಡಿದ್ದಾರೆ. ಇದಕ್ಕೆ ಜನರಿಂದ ನಿರೀಕ್ಷೆಗೂ ಮೀರಿ ಪ್ರೋತ್ಸಾಹವೂ ಸಿಗುತ್ತಿದೆ. ಅದರೆ ಮತ್ತೊಂದೆಡೆ ಪಕ್ಷದ ಇತರ ನಾಯಕರಾದ ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಹಾಗೂ ಡಿ.ಎಚ್.ಶಂಕರಮೂರ್ತಿ ಅವರು ಯಡಿಯೂರಪ್ಪ ವಿರುದ್ಧ ವರಿಷ್ಠರ ಮುಂದೆ ಸದ್ದಿಲ್ಲದಂತೆ ಕೆಂಪುಬಾವುಟ ಹಾರಿಸುತ್ತಿದ್ದಾರೆ.

ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳುವಾಗ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ. ಈ ಕುರಿತು ಮೌಖಿಕವಾಗಿ ತಮ್ಮೊಂದಿಗೆ ಚರ್ಚಿಸದೆ ಫ್ಯಾಕ್ಸ್ ಮೂಲಕ ಮಾಹಿತಿ ರವಾನಿಸಿದ್ದಾರೆ ಎಂಬುದು ಈ ನಾಯಕತ್ರಯರ ಅಸಮಾಧಾನದ ಮೂಲ ಕಾರಣ.

ಇದರ ಜತೆಯಲ್ಲೇ ಜೆಡಿಎಸ್‌ನ ಚೆಲುವರಾಯಸ್ವಾಮಿಯವರನ್ನು ಬಿಜೆಪಿಗೆ ಸೆಳೆದುಕೊಳ್ಳುವ ಯತ್ನಗಳು ನಡೆಯುತ್ತಿವೆ. ಮಾಜಿ ಸಚಿವ ಅಶೋಕ್ ನೇತೃತ್ವದಲ್ಲಿ ಈ ಕುರಿತಾದ ಮಾತುಕತೆ ಸಾಗುತ್ತಿದೆ ಎಂಬ ಸುದ್ದಿಗಳು ಹಬ್ಬಿವೆ. ಸದ್ಯದಲ್ಲಿಯೇ ಚುನಾವಣೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ ಬಿಜೆಪಿಯ ಬಲವರ್ಧನೆ ಮಾಡುವುದರ ಪ್ರಯತ್ನ ಇದಾಗಿದೆ ಎಂದು ತಿಳಿದುಬಂದಿದೆ.

ಒಂದೆಡೆ ಆಂತರಿಕ ಭಿನ್ನಮತದ ಹೊಗೆ, ಮತ್ತೊಂದೆಡೆ ಪಕ್ಷದ ಬಲಸಂವರ್ಧನೆಯ ಮಹತ್ವಾಕಾಂಕ್ಷೀ ಪ್ರಯತ್ನ. ಬಿಜೆಪಿ ವರಿಷ್ಠರು ಈ ಎರಡೂ ಬಗೆಯ ನಡೆಗಳಿಗೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದೇ ಮುಂದಿರುವ ಕುತೂಹಲ.
ಮತ್ತಷ್ಟು
ಬಂಡಾಯ ಜೆಡಿಎಸ್ ಸಭೆಯತ್ತ ಎಲ್ಲರ ಕಣ್ಣು
ಯಡ್ಡಿ ವಿರುದ್ಧ ಶೆಟ್ಟರ್ ಅಕ್ರೋಶ
ಮತ್ತೆ ನಾಡಗೀತೆ ವಿವಾದ
ಹಕ್ಕನ್ನು ಕಿತ್ತುಕೊಳ್ಳಲು ಸಾಧ್ಯವಿಲ್ಲ: ಪುತ್ತಿಗೆ ಶ್ರಿಗಳು
ಬುಧವಾರ ಜೆಡಿಎಸ್ ಬಂಡಾಯ ಸಭೆ
ವಿಧಾನಸಭೆ ವಿಸರ್ಜನೆಗೆ 3 ಪಕ್ಷಗಳ ಸ್ವಾಗತ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com