|
ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ
|
|
|
ಬೆಂಗಳೂರು, ಬುಧವಾರ, 28 ನವೆಂಬರ್ 2007( 14:32 IST )
|
|
|
|
|
|
|
|
ರಾಜ್ಯ ವಿಧಾನಸಭೆ ವಿಸರ್ಜನೆಗೊಂಡು ಮಧ್ಯಂತರ ಚುನಾವಣೆ ನಡೆಯುವುದು ಖಚಿತವಾಗುತ್ತಿದ್ದಂತೆ ಒಂದು ಬಾರಿ ಅಧಿಕಾರ ಅನುಭವಿಸಿರುವ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಅಪಸ್ವರ ಕೇಳಿಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಜನಜಾಗೃತಿ ಯಾತ್ರೆ ಹಮ್ಮಿಕೊಂಡಿರುವ ವೇಳೆ ಈ ಭಿನ್ನಮತ ನಡೆದಿದೆ. ಪಕ್ಷದ ಹಿರಿಯ ಮುಖಂಡರಾದ ಈಶ್ವರಪ್ಪ, ಜಗದೀಶ್ ಶೆಟ್ಟರ್ ಹಾಗೂ ಡಿ.ಎಚ್. ಶಂಕರಮೂರ್ತಿ ಅವರು ಯಡಿಯೂರಪ್ಪ ಅವರ ಆಪ್ತರೆಂದೇ ಗುರುತಿಸಿಕೊಂಡಿರುವ ಸದಾನಂದಗೌಡರನ್ನು ಚುನಾವಣೆಗೆ ಮುನ್ನ ಬದಲಾಯಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಈ ಮೂವರು ಭಿನ್ನಮತೀಯರು ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ದೂರು ನೀಡಲು ಮಾಡಿದ ಪ್ರಯತ್ನ ಕಾರಣಾಂತರದಿಂದ ಫಲಕಾರಿಯಾಗಲಿಲ್ಲ. ಪಕ್ಷದ ಸಂಘಟನೆ ಕುರಿತು ಸದಾನಂದಗೌಡ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುತ್ತಿರುವುದಕ್ಕೆ ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಈ ಮೂವರು ಭಿನ್ನಮತೀಯರನ್ನು ಪಕ್ಷದ ರಾಷ್ಟ್ತ್ರೀಯ ಮುಖಂಡ ಎಲ್.ಕೆ. ಅಡ್ವಾಣಿ ಅವರೇ ದೆಹಲಿಗೆ ಕರೆಸಿಕೊಂಡಿದ್ದರು ಎಂಬುದು ಡಿ.ಎಚ್.ಶಂಕರಮೂರ್ತಿ ಹೇಳಿಕೆ.
ರಾಜಕೀಯದಲ್ಲಿ ಆಗುತ್ತಿರುವ ಬದಲಾವಣೆ, ಬೇರೆ ಪಕ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಹಲವಾರು ಜನರು ಮಾಡುತ್ತಿರುವ ಪ್ರಯತ್ನಗಳನ್ನು ಪಕ್ಷದ ಮುಖಂಡರಿಗೆ ವಿವರಿಸಲು ತಾವೇ ಆ ಮೂವರು ಮುಖಂಡರನ್ನು ದೆಹಲಿಗೆ ಕಳುಹಿಸಿರುವುದಾಗಿ ಯಡಿಯೂರಪ್ಪ ಅವರು ಹೇಳಿ, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|
|
|
|
|
|
|
|