ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ದಳದ ಮತ್ತೊಂದು ವಿದಳನೆಗೆ ವೇದಿಕೆ ಸಜ್ಜು?
ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದ ಕರ್ನಾಟಕ ರಾಜಕೀಯಕ್ಕೆ ವಿಧಾನಸಭೆ ವಿಸರ್ಜನೆಯ ಅಧಿಕೃತ ಘೋಷಣೆಯು ತೆರೆ ಹಾಕಿರುವುದರೊಂದಿಗೆ, ಪಶ್ಚಾತ್ ಕಂಪನ ಮಾದರಿಯಲ್ಲಿ ಜನತಾ ದಳವು ಒಡಕಿನ ಅಂಚಿಗೆ ಬಂದು ತಲುಪಿದೆ.

ಚುನಾವಣೆಗಳು ಘೋಷಣೆಯಾಗಲಿರುವ ಹಿನ್ನೆಲೆಯಲ್ಲಿ ಇಂದು ನಡೆಯಲಿರುವ ಜೆಡಿಎಸ್‌ನ ಅಧಿಕೃತ ಕಾರ್ಯಕಾರಿಣಿ ಸಭೆಯಲ್ಲಿ ಹೊರಬರುವ ತೀರ್ಮಾನಗಳ ಬಗ್ಗೆ ರಾಜಕೀಯ ವಲಯದ ಕುತೂಹಲ ಹೆಚ್ಚಿದೆ. 11.30 ಗಂಟೆಯ ಸುಮಾರಿಗೆ ಸಭೆ ಆರಂಭವಾಗಲಿದ್ದು, ಭಿನ್ನಮತೀಯ ಶಾಸಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂಬುದು ಎಲ್ಲರ ಕುತೂಹಲ.

ನಿನ್ನೆಯ ಎಂ.ಪಿ.ಪ್ರಕಾಶ್ ನೇತೃತ್ವದ ಸಮಾನ ಮನಸ್ಕರ ಸಭೆಯಲ್ಲಿ ಭಾಗವಹಿಸಿದ್ದ 17 ಎಂ.ಎಲ್.ಎ.ಗಳು ಹಾಗೂ 3 ಎಂ.ಎಲ್.ಸಿ.ಗಳು ಇಂದಿನ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಮೇಲಾಗಿ ಈ ಸಭೆ ಏಕಪಕ್ಷೀಯ ಸಭೆ ಹಾಗೂ ಬಹಿರಂಗ ಸಭೆಯಷ್ಟೇ ಎಂದು ಪ್ರಕಾಶ್ ಪ್ರತಿಕ್ರಿಯಿಸಿರುವ ಹಿನ್ನೆಲೆಯಲ್ಲಿ ಈ ಸಭೆಗೆ ಪ್ರಾಮುಖ್ಯತೆ ಬಂದಿದೆ.

ಇಂದಿನ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಪಕ್ಷದ ಬಲವರ್ಧನೆಗೆ ಸಹಾಯವಾಗಲಿದೆಯೇ ಅಥವಾ ಮತ್ತೊಮ್ಮೆ ಹೋಳಾಗುವ ಪ್ರಕ್ರಿಯೆಗೆ ಅನುವು ಮಾಡಿಕೊಡಲಿದೆಯೇ ಎಂಬುದರೆಡೆಗೆ ಎಲ್ಲರೂ ಕಾದುನೋಡುವಂತಾಗಿದೆ.
ಮತ್ತಷ್ಟು
ವಿಧಾನ ಸಭೆ ವಿಸರ್ಜನೆ: ರಾಜಕೀಯ ದೊಂಬರಾಟಕ್ಕೆ ವಿರಾಮ
ಪ್ರಕಾಶ್ -ವೀರೇಂದ್ರ ಮಾತುಕತೆ
ಬಂಡಾಯ ಬಣದಿಂದ ಗೌಡರ ಸಭೆ ಬಹಿಷ್ಕಾರ
ನಾಳಿನದು ಕಾರ್ಯಕಾರಿಣಿಯಲ್ಲ, ಬಹಿರಂಗ ಸಭೆ ಮಾತ್ರ: ಪ್ರಕಾಶ್
ಜೆಡಿಎಸ್ ಭಿನ್ನಮತೀಯ ಸಭೆಗೆ ಬಂಡೆಪ್ಪಾ,ಲಾಡ್
ಭೂ ಒತ್ತುವರಿ: ಶೀಘ್ರ ಜಂಟಿ ಸಮಿತಿ ಅಂತಿಮ ವರದಿ ಸಲ್ಲಿಕೆ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com