|
ವಿಧಾನಸಭೆ ಸ್ಪೀಕರ್ ಹುದ್ದೆ ಅಬಾಧಿತ
|
|
|
|
|
|
|
|
|
|
|
ವಿಧಾನಸಭೆ ವಿಸರ್ಜನೆಯಾದರೂ ವಿಧಾನಸಭಾಧ್ಯಕ್ಷರ ಹುದ್ದೆಗೆ ಮಾತ್ರ ಯಾವ ಬಾಧಕವೂ ಇಲ್ಲ.
ಹೌದು. ಇದು ನಿಜ. ರಾಜ್ಯ ವಿಧಾನಸಭೆ ವಿಸರ್ಜನೆಯಾಗಿ ಶಾಸಕರೆಲ್ಲರೂ ತಮ್ಮ ಅಧಿಕಾರ ಕಳೆದುಕೊಂಡು ನಿರಾಶರಾಗಿ ಮನೆಗೆ ಮರಳಿದರೂ ವಿಧಾನಸಭೆಯ ಸ್ಪೀಕರ್ ಕೃಷ್ಣ ಮಾತ್ರ ಭದ್ರವಾಗಿ ಅವರ ಹುದ್ದೆಯಲ್ಲೇ ಮುಂದುವರೆಯುತ್ತಾರೆ. ವಿಧಾನಸಭೆಗೆ ಚುನಾವಣೆ ನಡೆದು ಹೊಸಬರು ಸ್ಪೀಕರ್ ಹುದ್ದೆಗೆ ಆರಿಸಿಬರುವವರೆಗೆ ಕೃಷ್ಣ ಅವರೇ ಸಂವಿಧಾನ ಬದ್ಧವಾಗಿ ಸ್ಪೀಕರ್ ಹುದ್ದೆಯಲ್ಲಿ ಮುಂದುವರೆಯುತ್ತಾರೆ.
ಸಂಸದೀಯ ವ್ಯವಹಾರಗಳ ಕೆಲವು ಜವಾಬ್ದಾರಿಗಳನ್ನು ಹೊರತುಪಡಿಸಿ ಇನ್ನುಳಿದಂತೆ ಎಲ್ಲ ಪರಮಾಧಿಕಾರಗಳೂ ಕೃಷ್ಣ ಅವರಿಗಿರುತ್ತವೆ. ವಿಧಾನಸಭೆ ವಿಸರ್ಜನೆಯಾದ ಕೂಡಲೇ ಸ್ಪೀಕರ್ ಆಗಿದ್ದವರು ತಮ್ಮ ಹುದ್ದೆಯನ್ನು ತ್ಯಜಿಸಬೇಕಿಲ್ಲ ಎಂದು ಸಂವಿಧಾನದ 179ನೇ ವಿಧಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ವಿಧಾನಸಭೆ ತನ್ನ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದ್ದರೂ ಸಹಾ ಚುನಾವಣೆ ಘೋಷಣೆಯಾದ ಸಂದರ್ಭದಲ್ಲೂ ಹಾಲಿ ಇರುವ ಸ್ಪೀಕರ್ ಹುದ್ದೆ ಹೊಸಬರು ಬರುವವರೆಗೆ ಮುಂದುವರೆಯುತ್ತದೆ. ಆದರೆ ಈ ಸೌಲಭ್ಯ ಡೆಪ್ಯೂಟಿ ಸ್ಪೀಕರ್ ಹುದ್ದೆಗೆ ಇಲ್ಲ. ವಿಧಾನಸಭೆ ವಿಸರ್ಜನೆಯೊಂದಿಗೆ ಡೆಪ್ಯೂಟಿ ಸ್ಪೀಕರ್ ಹುದ್ದೆಯೂ ವಿಸರ್ಜನೆಗೊಳ್ಳುತ್ತದೆ.
|
|
|
|
|
|
|
|