|
ರಾಮಸ್ವಾಮಿ ವಿರುದ್ಧ ಉಗ್ರಪ್ರತಾಪ: ಪೊಲೀಸರಿಗೆ ದೂರು
|
|
|
ಬೆಂಗಳೂರು, ಶನಿವಾರ, 1 ಡಿಸೆಂಬರ್ 2007( 15:09 IST )
|
|
|
|
|
|
|
|
ಭೂ ಒತ್ತುವರಿ ಕುರಿತು ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ನೀಡಿದ ವರದಿ ಪಕ್ಷಪಾತದಿಂದ ಕೂಡಿದೆ ಎಂದು ಕಾಂಗ್ರೆಸ್ನ ವಿ.ಎಸ್.ಉಗ್ರಪ್ಪ ನಿನ್ನೆ ಸ್ಪೀಕರ್ ಕಾರ್ಯಾಲಯದಲ್ಲಿ ದಾಂಧಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದುಬಂದಿದೆ.
ತಮ್ಮ ಮೇಲಿನ ಆಪಾದನೆ ಕುರಿತು ವಿವರಣೆ ನೀಡಿರುವ ಎ.ಟಿ.ರಾಮಸ್ವಾಮಿ, ತಮ್ಮ ವರದಿ ನಿಚ್ಚಳವಾಗಿದೆ ಹಾಗೂ ನಿಷ್ಪಕ್ಷಪಾತದಿಂದ ಕೂಡಿದೆ. ಈ ಆರೋಪ ಸತ್ಯಕ್ಕೆ ದೂರ. ಇದು ನಿಜವೇ ಆಗಿದ್ದರೆ ಸಾಬೀತುಪಡಿಸಲಿ ಎಂದು ಉಗ್ರಪ್ಪನವರಿಗೆ ಸವಾಲು ಹಾಕಿದ್ದಾರೆ.
ವರದಿ ಸಿದ್ಧಪಡಿಸಿದ ನಂತರ ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ರಾಜ್ಯಪಾಲರು ಪಟ್ಟಭದ್ರರ ಒತ್ತಡಕ್ಕೆ ಮಣಿಯದೆ ಭೂಕಬಳಿಕೆದಾರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿ ಎಂದು ನುಡಿದ ರಾಮಸ್ವಾಮಿ, ಉಗ್ರಪ್ಪನವರು ಸಭಾಧ್ಯಕ್ಷರ ಕಾರ್ಯಾಲಯಕ್ಕೆ ಅಕ್ರಮ ಪ್ರವೇಶ ಮಾಡಿದ್ದಾರೆ. ಮೇಲ್ಮನೆ ಸದಸ್ಯರಿಗೆ ಈ ರೀತಿಯ ವರ್ತನೆ ಶೋಭಿಸುವುದಿಲ್ಲ ಎಂದೂ ಹೇಳಿದ್ದಾರೆ.
ಒಟ್ಟಿನಲ್ಲಿ ರಾಜ್ಯಪಾಲರು ಕೈಗೊಳ್ಳುವ ಕ್ರಮಗಳ ಕಡೆಗೆ ಎಲ್ಲರ ಕುತೂಹಲದ ದೃಷ್ಟಿ ನೆಟ್ಟಿದೆ.
|
|
|
|
|
|
|
|