ಸುದ್ದಿ ಜಗತ್ತು
ವ್ಯವಹಾರ
ರಾಜ್ಯ ಸುದ್ದಿ
ರಾಷ್ಟ್ರೀಯ
ಮನರಂಜನೆ
ಸ್ಯಾಂಡಲ್ ವುಡ್
ಬಾಲಿವುಡ್‌
ಇನ್ನಷ್ಟು ಹಾಸ್ಯ...
ಕ್ರೀಡಾ ಜಗತ್ತು
ಕ್ರಿಕೆಟ್ ಟಿಕರ್
ಕ್ರೀಡಾಸುದ್ದಿ
ಕ್ರಿಕೆಟ್‌
ಜ್ಯೋತಿಷ್ಯ
ಜ್ಯೋತಿಷ್ಯಶಾಸ್ತ್ರ
ವಾಸ್ತು
ನಿಮ್ಮ ಜಾತಕ
ಫೋಟೋ ಗ್ಯಾಲರಿ
ಹಾಟ್‌ಶಾಟ್
ಸಿನಿಮಾ
ಬಾಲಿವುಡ್
ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
 
ಜಿ.ಟಿ. ದೇವೇಗೌಡ ಬಿಜೆಪಿಗೆ?
ಮೈಸೂರಿನ ರಾಜಕೀಯ ವಲಯದಲ್ಲಿ ಅತೀವ ಪ್ರಭಾವ ಹೊಂದಿರುವ ಮಾಜಿ ಸಚಿವ ಜಿ.ಟಿ.ದೇವೇಗೌಡರು ಬಿಜೆಪಿ ಸೇರಲಿದ್ದಾರೆಯೇ? ಪ್ರಸಕ್ತ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಆ ಸಾಧ್ಯತೆಗಳು ಹೆಚ್ಚಾಗಿರುವಂತೆ ತೋರುತ್ತಿದೆ.

ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಅಶೋಕ್ರವರುಗಳು ಈ ಕುರಿತು ಜಿ.ಟಿ.ದೇವೇಗೌಡರಿಗೆ ಆಮಂತ್ರಣವನ್ನು ನೀಡಿದ್ದು, ಅವರು ಅದಕ್ಕೆ ಮನ್ನಣೆ ನೀಡಲಿದ್ದಾರೆ ಎಂಬ ಆತ್ಮವಿಶ್ವಾಸವನ್ನು ಹೊಂದಿದ್ದಾರೆ.

ಈ ಕುರಿತು ಹಲವು ದಿನಗಳಿಂದಲೂ ಮಾತುಕತೆ ನಡೆಯುತ್ತಿದ್ದು ಜಿ.ಟಿ.ದೇವೇಗೌಡರು ಈ ಕುರಿತು ಯಾವುದೇ ಸ್ಪಷ್ಟ ನಿಲುವುಗಳನ್ನು ಹೇಳಿಕೊಂಡಿರಲಿಲ್ಲ. ತಮ್ಮ ಕ್ಷೇತ್ರದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣನವರು ಮಿತಿಮೀರಿ ಹಸ್ತಕ್ಷೇಪ ಮಾಡುತ್ತಿದ್ದುದರಿಂದ ತೀವ್ರ ಅಸಮಾಧಾನಗೊಂಡಿದ್ದ ಅವರು, ಜೆಡಿಎಸ್ನ ವಚನ ಭ್ರಷ್ಠತೆ ಹಾಗೂ ವಿಶ್ವಾಸದ್ರೋಹಗಳಿಂದಾಗಿ ಕ್ಷೇತ್ರದ ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ ಎಂಬ ಒಳಗುದಿಯನ್ನೂ ವಿಶ್ವಾಸಿಗಳ ಮುಂದೆ ತೋಡಿಕೊಂಡಿದ್ದರು.

ಈಗ ಅವರು ಬಿಜೆಪಿಗೆ ಸೇರಿ ಜೆಡಿಎಸ್ ವಿರುದ್ಧ ರಣಕಹಳೆ ಊದಲಿದ್ದರೆಯೇ ಎಂಬುದೀಗ ಮಿಲಿಯನ್ ಡಾಲರ್ ಪ್ರಶ್ನೆ. ಈಗಾಗಲೇ ಮತ್ತೊಬ್ಬ ಮಾಜಿ ದಳಪತಿ ಸಿದ್ರಾಮಯ್ಯನವರು ಕಾಂಗ್ರೆಸ್ ಸೇರಿರುವುದರಿಂದ ಮೈಸೂರು ವಲಯದಲ್ಲಿ ಜೆಡಿಎಸ್ ಶಕ್ತಿ ಕುಂದಲಿದೆಯೇ ಎಂಬುದು ಕುತೂಹಲಕರ ವಿಷಯವಾಗಿದೆ.
ಮತ್ತಷ್ಟು
ಜವಾಬ್ದಾರಿ ಹೊರಲು ಕೃಷ್ಣ ಆಸಕ್ತಿ?
ಕೆಪಿಸಿಸಿ ಪುನಾರಚನೆ: ದೆಹಲಿಗೆ ಶಾಸಕರ ದಂಡು
ಭೂ ವಿವಾದದ ತೆಕ್ಕೆಗೆ ಸಂಸದೆ ತೇಜಸ್ವಿನಿ
ಇಲ್ಲಿರಲಾರೆ; ಅಲ್ಲಿಗೆ ಹೋಗಲಾರೆ : ಎಂ.ಪಿ.ಪ್ರಕಾಶ್
ಸಂಪ್ರದಾಯಕ್ಕೆ ಬದ್ಧ - ಪೇಜಾವರ ಶ್ರೀ
ದುಡ್ಡು ಮಾಡುವುದೇ ಗೌಡ ಕುಟುಂಬದ ಜೀವನ: ಯಡ್ಡಿ
ಮುಖಪುಟ  | ನಮ್ಮ ಕುರಿತು  | ಸಲಹೆಗಳು  | ಜಾಹೀರಾತು ನೀಡಲು  | ಮಿತ್ರನಿಗೆ ಕಳಿಸು  | ಹಕ್ಕು ನಿರಾಕರಣೆ
Copyright © 2009 Webdunia.com