|
ಅಧ್ಯಕ್ಷರ ಬದಲಾವಣೆ ಅಗತ್ಯವಿಲ್ಲ: ದಿನೇಶ್ ಗುಂಡೂರಾವ್
|
|
|
ಬೆಂಗಳೂರು, ಮಂಗಳವಾರ, 4 ಡಿಸೆಂಬರ್ 2007( 17:01 IST )
|
|
|
|
|
|
|
|
ರಾಜ್ಯದ ಎಲ್ಲ ಚುನಾವನೆಗಳಲ್ಲೂ ಪಕ್ಷ ಚೆನ್ನಾಗಿಯೇ ಫಲಿತಾಂಶ ನೀಡಿದೆ. ಅಧ್ಯಕ್ಷರೂ ಚೆನ್ನಾಗಿಯೇ ಕೆಲಸ ಮಾಡಿದ್ದಾರೆ. ಹೀಗಿರುವಾಗ ಅವರನ್ನೇಕೆ ಬದಲಾಯಿಸಬೇಕು?
ಹೀಗೆಂದು ಪ್ರಶ್ನಿಸಿದವರು ಕಾಂಗ್ರೆಸ್ ಪಕ್ಷದ ಯುವ ನಾಯಕ ದಿನೇಶ್ ಗುಂಡೂರಾವ್. ಮುಂಬರುವ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯದ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಬೇಕು ಎಂಬ ಕೂಗು ಎದ್ದಿರುವ ಹಿನ್ನೆಲೆಯಲ್ಲಿ ಅಂಥ ಯಾವ ಪ್ರಯತ್ನಗಳಿಗೂ ಕೈಹಾಕುವುದು ಬೇಡ ಎಂದು ವರಿಷ್ಠರನ್ನು ಒತ್ತಾಯಿಸಲು ದಿನೇಶ್ ಈಗ ದೆಹಲಿಯಲ್ಲಿದ್ದಾರೆ.
ಎಸ್.ಎಂ.ಕೃಷ್ಣ ರಾಜ್ಯದ ರಾಜಕೀಯಕ್ಕೆ ಮರಳಿದರೆ ಅದು ಎಲ್ಲರಿಗೂ ಸಂತೋಷವೇ. ಅವರಷ್ಟೇ ಅಲ್ಲ, ಅಂಬರೀಶ್, ಸಿದ್ರಾಮಯ್ಯ, ಧರ್ಮಸಿಂಗ್ ಇವರೇ ಮೊದಲಾದವರ ಕೊಡುಗೆ ಪಕ್ಷಕ್ಕೀಗ ಅಗತ್ಯವಾಗಿದೆ. ಇದರ ಜೊತೆ ಜೊತೆಗೆ ಪಕ್ಷದಲ್ಲಿ ಯುವಕರಿಗೂ ಆದ್ಯತೆ ಸಿಗಬೇಕಿದೆ. ಹಾಗಂತ ಖರ್ಗೆಯವರನ್ನು ಬದಲಿಸಬೇಕು ಎಂದು ಇದರರ್ಥವಲ್ಲ. ಖರ್ಗೆಯಂಥ ದಲಿತ ನಾಯಕರು ಪಕ್ಷದ ಅಧ್ಯಕ್ಷರಾಗಿರುವುದೇ ನಮಗೊಂದು ಹೆಮ್ಮೆ ಎಂದು ದಿನೇಶ್ ತಿಳಿಸಿದ್ದಾರೆ.
ಪಕ್ಷದ ಸಂಘಟನೆಯ ಕುರಿತು ಈಗಾಗಲೇ ರಾಹುಲ್ ಗಾಂಧಿಯವರೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿರುವ ದಿನೇಶ್ ಗುಂಡೂರಾವ್, ಪೃಥ್ವೀರಾಜ್ ಚವ್ಹಾಣ್ ಸೇರಿದಂತೆ ಇನ್ನೂ ಹಲವು ನಾಯಕರ ಜೊತೆಗೂ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
|
|
|
|
|
|
|
|