ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪರ್ಯಾಯಕ್ಕೆ ಕ್ಷಣಗಣನೆ: ಶೃಂಗಾರಗೊಂಡ ಉಡುಪಿ
ಶ್ರೀಕೃಷ್ಣ ಮಠದ ಪೂಜೆಯ ಪರ್ಯಾಯ ಪೀಠಾರೋಹಣ ಉತ್ಸವಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಶುಕ್ರವಾರ ಪ್ರಾತಃಕಾಲ 05.55 ಗಂಟೆಗೆ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಮೂರನೇ ಬಾರಿಗೆ ಪರ್ಯಾಯ ಪೀಠವೇರುವರು.

ಸಾಗರೋಲ್ಲಂಘನ ಮಾಡಿರುವ ಪುತ್ತಿಗೆ ಶ್ರೀಗಳಿಂದ ಶ್ರೀಕೃಷ್ಣ ಪೂಜೆಗೆ ಅಷ್ಟಮಠಗಳ ಹಲವು ಯತಿಗಳಿಂದ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ಪರ್ಯಾಯೋತ್ಸವವು ಕೊನೆಯ ಕ್ಷಣದವರೆಗೂ ವಿವಾದದ ಕುತೂಹಲ ಉಳಿಸಿಕೊಂಡಿದೆ.

ಸುಗುಣೇಂದ್ರ ತೀರ್ಥರು ಪುತ್ತಿಗೆ ಮಠ ಪರಂಪರೆಯ 30ನೇ ಯತಿಗಳಾಗಿದ್ದು, ಈ ಹಿಂದೆ 1976-78 ಹಾಗೂ 1992-94ರ ಅವಧಿಯಲ್ಲಿ ಅವರು ಸರ್ವಜ್ಞ ಪೀಠವೇರಿದ್ದರು.

ಉಡುಪಿಗೆ ಉಡುಪಿಗೆ ಸಕಲ ರೀತಿಯಲ್ಲೂ ಶೃಂಗಾರಗೊಂಡು ಕಂಗೊಳಿಸುತ್ತಿದ್ದು, ಅಲ್ಲಲ್ಲಿ ಬ್ಯಾನರುಗಳು, ಸ್ವಾಗತ ಕಮಾನಗಳು, ಫಲಕಗಳು ರಾರಾಜಿಸುತ್ತಿವೆ. ಪರ್ಯಾಯ ಮೆರವಣಿಗೆಯಲ್ಲಿ ಟ್ಯಾಬ್ಲೋಗಳು, ಜಾನಪದ ನೃತ್ಯ ತಂಡಗಳು ಗಮನ ಸೆಳೆಯಲಿವೆ.

ದಂಡತೀರ್ಥದಲ್ಲಿ ಪವಿತ್ರ ಸ್ನಾನ ಮಾಡುವ ಪುತ್ತಿಗೆ ಶ್ರೀಗಳು, ಪುತ್ತಿಗೆ ಮಠದ ಆರಾಧ್ಯ ದೈವ ವೀರ ವಿಠಲನ ವಿಗ್ರಹದೊಂದಿಗೆ ಜೋಡುಕಟ್ಟೆಗೆ ಆಗಮಿಸಲಿದ್ದಾರೆ.

ಈಗಿರುವ ವಿವಾದವು ಸುಸೂತ್ರವಾಗಿ ಪರಿಹಾರವಾದಲ್ಲಿ, ಅಷ್ಟಮಠಗಳ ಇತರ ಯತಿಗಳು ಪರ್ಯಾಯ ಶ್ರೀಗಳನ್ನು ಜೋಡುಕಟ್ಟೆಯಲ್ಲಿ ಬರಮಾಡಿಕೊಳ್ಳಲಿದ್ದಾರೆ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಕನಕನ ಕಿಂಡಿ ಮೂಲಕ ಶ್ರೀಕೃಷ್ಣ ದರ್ಶನ ಪಡೆಯುವ ಪುತ್ತಿಗೆ ಶ್ರೀಗಳು, ಬಳಿಕ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವರ ದರ್ಶನ ಪಡೆಯುವರು.

ಸರ್ವಜ್ಞ ಪೀಠದಿಂದ ಕೆಳಗಿಳಿಯಲಿರುವ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರ ತೀರ್ಥರು ರಾತ್ರಿ ಪೂಜೆ ನೆರವೇರಿಸಿ ಪುತ್ತಿಗೆ ಶ್ರೀಗಳಿಗಾಗಿ ಪೂಜೆ ಬಿಟ್ಟುಕೊಡಲಿದ್ದಾರೆ. ಶ್ರೀಕೃಷ್ಣ ಮಠದ ಹೆಬ್ಬಾಗಿಲಲ್ಲಿ ಪುತ್ತಿಗೆ ಶ್ರೀಗಳನ್ನು ಇದಿರುಗೊಳ್ಳಲಿರುವ ಅವರು, ಗರ್ಭಗುಡಿಗೆ ಕರೆದೊಯ್ಯಲಿದ್ದಾರೆ. ನವಗ್ರಹ ಕಿಂಡಿಯಲ್ಲಿ ದೇವರ ದರ್ಶನ ನಡೆಯುವ ಕೃಷ್ಣಾಪುರ ಶ್ರೀಗಳು, ಗುಡಿಯ ಕೈಲಿಗಳನ್ನು ಮತ್ತು ಅಕ್ಷಯಪಾತ್ರೆಯನ್ನು ಅವರಿಗೊಪ್ಪಿಸಿ, ಶ್ರೀಕೃಷ್ಣ ಮಠದ ಆಡಳಿತವನ್ನು ಅಧಿಕೃತವಾಗಿ ಹಸ್ತಾಂತರಿಸಲಿದ್ದಾರೆ.
ಮತ್ತಷ್ಟು
ಪರ್ಯಾಯ: ಸಂಧಾನ ವಿಫಲಕ್ಕೆ ಹೊಸ ಶರತ್ತು ಕಾರಣ
ನೀರಾಗಿ ಕಾಡಿತ್ತು ಮಾಯೆ
ಯಾವ ಪಕ್ಷ ಒಳಿತು?: ಪ್ರಕಾಶ್ ಇಂದು ನಿರ್ಧಾರ
ಕ್ಯಾಂಟರ್ ಡಿಕ್ಕಿಯಿಂದ ಪಾದಚಾರಿಯ ಸಾವು
ಪರ್ಯಾಯ: ಇನ್ನೂ ಪರಿಹಾರವಾಗದ ವಿವಾದ
ಪರ್ಯಾಯೋತ್ಸವಕ್ಕೆ ಅಲಂಕಾರಗೊಂಡಿದೆ ಉಡುಪಿ