ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆತಂಕ - ಗೊಂದಲಗಳ ಮಧ್ಯೆಯೇ ಪರ್ಯಾಯಕ್ಕೆ ಸಿದ್ಧತೆ
ಪುತ್ತಿಗೆ ಶ್ರೀಗಳಿಗೆ ಶ್ರೀಕೃಷ್ಣ ಪೂಜೆಯ ಅಧಿಕಾರ ನೀಡುವ ಕುರಿತು ಪೇಜಾವರ ಶ್ರೀಗಳು ತಮ್ಮ ಅಸಮ್ಮತಿಯನ್ನು ಸೂಚಿಸಿರುವ ಹಿನ್ನೆಲೆಯಲ್ಲಿಯೇ ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ನಡೆದಿವೆ. ಆದರೆ ಸಂಭ್ರಮದ ಜೊತೆ ಜೊತೆಗೆ ಭಯ ಹಾಗೂ ಗೊಂದಲದ ವಾತಾವರಣವೂ ಉಡುಪಿಯಲ್ಲಿ ನಿರ್ಮಾಣಗೊಂಡಿರುವುದು ಈ ಬಾರಿಯ ಅಸಹಜ ವೈಶಿಷ್ಟ್ಯ.

ಇದಕ್ಕೆ ಕಾರಣವೂ ಇಲ್ಲದಿಲ್ಲ. ತಮ್ಮ ಷರತ್ತುಗಳಿಗೆ ಪುತ್ತಿಗೆ ಶ್ರೀಗಳು ಬಗ್ಗುತ್ತಿಲ್ಲ ಎಂದು ಅರಿವಾದಾಗ ಪೇಜಾವರ ಶ್ರೀಗಳು ಮೂರು ದಿನಗಳ ಕಠಿಣ ಉಪವಾಸ ವ್ರತ ಕೈಗೊಂಡರೂ ಪುತ್ತಿಗೆ ಶ್ರೀಗಳು ಜಗ್ಗಲಿಲ್ಲ. ಉಳಿದ ಆರು ಮಠಾಧೀಶರ ಸಂಧಾನಕ್ಕೂ ಬಗ್ಗಲಿಲ್ಲ. ಸಂಧಾನ ವಿಫಲವಾಗಿದೆ, ಪೇಜಾವರರ ಉಪವಾಸ ವ್ರತವೂ ಮುಂದುವರೆದಿದೆ. ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯ ಕುರಿತು ಕಾಳಜಿ ಇಟ್ಟಿರುವ ಭಕ್ತಾಭಿಮಾನಿಗಳಲ್ಲಿ ಉಂಟಾಗಿರುವ ತಲ್ಲಣ ಮತ್ತು ಮಾತು ಪಾಲಿಸದ್ದರಿಂದ ಏನಾಗುವುದೋ ಎಂಬ ಆತಂಕಗಳು ಉಡುಪಿಯಲ್ಲಿ ಮನೆ ಮಾಡಿವೆ.

ಈ ಎಲ್ಲ ಅಸಹಜತೆಗಳ ನಡುವೆಯೇ ಉಡುಪಿಯ ಜೋಡುಕಟ್ಟೆಯಿಂದ ಭಾವೀ ಪರ್ಯಾಯ ಪೀಠಾಧಿಪತಿ ಸುಗುಣೇಂದ್ರರ ಪಲ್ಲಕ್ಕಿ ಮೆರವಣಿಗೆ ಪ್ರಾರಂಭವಾಗಿದೆ. ಅದರಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರೂ ಪಾಲ್ಗೊಂಡಿದ್ದಾರೆ.

ಸನ್ನಿವೇಶದ ಗಂಭೀರತೆಯನ್ನು ಅರಿತು ಸಾಕಷ್ಟು ಸಂಖ್ಯೆಯ ಪೊಲೀಸರನ್ನು ಉಡುಪಿಯಲ್ಲಿ ಈಗಾಗಲೇ ನಿಯೋಜಿಸಲಾಗಿದೆ. ಸಂಜೆಯ ವೇಳೆಗೆ ಪರಿಸ್ಥಿತಿ ಕೊಂಚವಾದರೂ ತಿಳಿಯಾದೀತು ಎಂಬ ನೀರೀಕ್ಷೆ ಜನರದ್ದು.
ಮತ್ತಷ್ಟು
3 ವರ್ಷದಲ್ಲಿ ನೈಸರ್ಗಿಕ ಅನಿಲ ವಿದ್ಯುತ್ ಕೇಂದ್ರಗಳು
ಪರ್ಯಾಯಕ್ಕೆ ಕ್ಷಣಗಣನೆ: ಶೃಂಗಾರಗೊಂಡ ಉಡುಪಿ
ಪರ್ಯಾಯ: ಸಂಧಾನ ವಿಫಲಕ್ಕೆ ಹೊಸ ಶರತ್ತು ಕಾರಣ
ನೀರಾಗಿ ಕಾಡಿತ್ತು ಮಾಯೆ
ಯಾವ ಪಕ್ಷ ಒಳಿತು?: ಪ್ರಕಾಶ್ ಇಂದು ನಿರ್ಧಾರ
ಕ್ಯಾಂಟರ್ ಡಿಕ್ಕಿಯಿಂದ ಪಾದಚಾರಿಯ ಸಾವು