ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೆಲೆ ಕಂಡುಕೊಳ್ಳದ ಎಂ.ಪಿ.ಪ್ರಕಾಶ್
ಎಲ್ಲೋ ಜೋಗಪ್ಪಾ ನಿನ್ ಅರಮಾನೇ..!!
NEWS ROOM
ತಮ್ಮ ಮುಂದಿನ ನೆಲೆ ಯಾವುದು ಎಂದು ನಿರ್ಧಾರವನ್ನು ತಳೆಯಲು ವಿಳಂಬ ಮಾಡುತ್ತಿರುವ ಮಾಜಿ ಸಚಿವ ಎಂ.ಪಿ.ಪ್ರಕಾಶ್ ಈ ಮುಂದೂಡಿಕೆಯ ಪರ್ವಕ್ಕೆ ಕೊನೆಯೇ ಇಲ್ಲವೇನೋ ಎಂಬ ಭಾವನೆ ಮೂಡಿಸಿದ್ದಾರೆ.

ಜೆಡಿಎಸ್‌ನಿಂದ ಬಂಡಾಯವೆದ್ದ ನಂತರ ಅವರ ಮುಂದಿನ ನೆಲೆ ಯಾವುದು ಎಂಬ ಕುರಿತು ಅವರ ಅಭಿಮಾನಿಗಳೂ ಸೇರಿದಂತೆ ರಾಜ್ಯದ ಜನರು ಕುತೂಹಲಗೊಂಡಿದ್ದು ನಿಜ. ಆದರೆ ನಿರ್ಧಾರ ಪ್ರಕಟಿಸಲು ಇಂದು-ನಾಳೆ ಎಂದೇ ಕಾಲ ತಳ್ಳುತ್ತ ಬಂದಿದ್ದ ಪ್ರಕಾಶ್ ಕೊನೆಗೆ ಗುಜರಾತ್ ಚುನಾವಣೆಯ ಕಾರಣವನ್ನು ಮುಂದೊಡ್ಡಿದ್ದರು. ಅದೂ ಆಯ್ತು. ನಂತರ ಅವರಿಗೆ ಹೊಳೆದದ್ದು ಸಂಕ್ರಾಂತಿ. ಸಂಕ್ರಾಂತಿಯ ವೇಳೆಗಾಗಲೇ ಒಂದೆರಡು ಪಾರ್ಟಿಯ ಮುಖಂಡರ ಮನೆಯಲ್ಲಿ ಹಲವು ಸುತ್ತಿನ ಮಾತುಗಳನ್ನು ಅವರು ನಡೆಸಿದ್ದರು. ಆದರೆ ಫಲಶೃತಿ ಹೊರಬಿದ್ದಿರಲಿಲ್ಲ.

ಇಂದು ಅವರ ಮನೆಯಲ್ಲಿ ಸಮಾನ ಮನಸ್ಕರ ಸಭೆ ನಡೆದ ನಂತರ ಗಟ್ಟಿಯಾದ ತೀರ್ಮಾನ ಹೊರಬೀಳಲಿದೆ ಎಂದೇ ಭಾವಿಸಲಾಗಿತ್ತು. ಆದರೆ ಸಭೆ ಮುಗಿದ ನಂತರ ಯಾವುದೇ ನಿರ್ಧಾರ ಹೊರಬೀಳದಿರುವುದು ಪ್ರಕಾಶ್ ಎದುರಿಸುತ್ತಿರುವ ಗೊಂದಲವನ್ನು ಸ್ಪಷ್ಟವಾಗಿ ಹೇಳುತ್ತಿದೆ.

ನಿನ್ನೆಯವರೆಗೂ ಪ್ರಕಾಶ್ ಬಿಜೆಪಿ ಸೇರಲಿದ್ದಾರೆ ಎಂದೇ ಬಿಂಬಿತವಾಗಿತ್ತು. ಆದರೆ ಇಂದು ನಡೆದ ಸಭೆಯಲ್ಲಿ ವ್ಯಕ್ತವಾದ ಭಿನ್ನಾಭಿಪ್ರಾಯಗಳು ಮತ್ತೆ ಅವರನ್ನು ದ್ವಂದ್ವಕ್ಕೆ ತಳ್ಳಿವೆ. ಕೆಲವರು ಕಾಂಗ್ರೆಸ್ ಕಡೆ ಮುಖ ಮಾಡಿದ್ದರೆ ಮತ್ತೆ ಕೆಲವರು ಬಿಜೆಪಿ ಕಡೆಗೆ ಒಲವು ತೋರಿರುವುದೇ ಇದಕ್ಕೆ ಕಾರಣ. ಇದಕ್ಕೆ ಕಾರಣವೂ ಇಲ್ಲದಿಲ್ಲ. ತಮಗಷ್ಟೇ ಅಲ್ಲದೇ ತಮ್ಮ ಬೆಂಬಲಿಗರಿಗೂ ಸೂಕ್ತ ಸ್ಥಾನಮಾನ ಕೊಡಿಸುವುದು ಪ್ರಕಾಶ್‌ ಅವರ ಸದ್ಯದ ಹೊಣೆಗಾರಿಕೆಯಾಗಿದೆ.

ದೆಹಲಿಯಲ್ಲಿ ಈಗಾಗಲೇ ಸೋನಿಯಾ ಗಾಂಧಿಯವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿರುವ ಅವರ ಹಳೆಯ ಸಹೋದ್ಯೋಗಿ ಸಿದ್ಧರಾಮಯ್ಯ, ಕಾಂಗ್ರೆಸ್‌ನಲ್ಲಿ ಪ್ರಕಾಶ್ ಹಾಗೂ ಅವರ ಬೆಂಬಲಿಗರಿಗೆ ಸೂಕ್ತ ಅವಕಾಶ ಕಲ್ಪಿಸಿಕೊಡುವ ಕುರಿತೂ ಆಸಕ್ತಿ ವಹಿಸಿದ್ದಾರೆ ಎಂಬ ಸುದ್ದಿಗಳೂ ಹಬ್ಬಿವೆ. ಈ ಹಿನ್ನೆಲೆಯಲ್ಲಿ ಒಂದು ವಾರದ ನಂತರ ಗಟ್ಟಿ ನಿರ್ಧಾರಕ್ಕೆ ಬರಲು ಪ್ರಕಾಶ್ ತೀರ್ಮಾನಿಸಿದ್ದಾರೆ. ಸಮಾನ ಮನಸ್ಕರ ಸಭೆಯ ನಂತರ ಸುದ್ದಿಗಾರರೊಂದಿಗಿನ ಅವರ ಮಾತುಗಳಲ್ಲಿ ಇದು ನಿಚ್ಚಳವಾಗಿ ಗೋಚರಿಸಿದೆ.
ಮತ್ತಷ್ಟು
ಆತಂಕ - ಗೊಂದಲಗಳ ಮಧ್ಯೆಯೇ ಪರ್ಯಾಯಕ್ಕೆ ಸಿದ್ಧತೆ
3 ವರ್ಷದಲ್ಲಿ ನೈಸರ್ಗಿಕ ಅನಿಲ ವಿದ್ಯುತ್ ಕೇಂದ್ರಗಳು
ಪರ್ಯಾಯಕ್ಕೆ ಕ್ಷಣಗಣನೆ: ಶೃಂಗಾರಗೊಂಡ ಉಡುಪಿ
ಪರ್ಯಾಯ: ಸಂಧಾನ ವಿಫಲಕ್ಕೆ ಹೊಸ ಶರತ್ತು ಕಾರಣ
ನೀರಾಗಿ ಕಾಡಿತ್ತು ಮಾಯೆ
ಯಾವ ಪಕ್ಷ ಒಳಿತು?: ಪ್ರಕಾಶ್ ಇಂದು ನಿರ್ಧಾರ