ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ: 40 ಬಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ: 40 ಬಲಿ
ಪಾಕಿಸ್ತಾನದಲ್ಲಿ ತಾಲಿಬಾನ್ ಉಗ್ರರಿಂದ ರಕ್ತದೋಕುಳಿ ಮುಂದುವರೆದಿದ್ದು,ವಾಯವ್ಯ ಪಾಕಿಸ್ತಾನದ ಮಸೀದಿಯೊಂದರಲ್ಲಿ ಪ್ರಬಲ ಬಾಂಬ್ ಸ್ಫೋಟಿಸಿ 40 ಜನರು ಅಸುನೀಗಿದ್ದಾರೆ.

ಅಪ್ಪರ್ ದಿರ್ ಜಿಲ್ಲೆಯ ಹಯಾ ಗಾಯ್ ಪ್ರದೇಶದಲ್ಲಿ ಶುಕ್ರವಾರದ ಪ್ರಾರ್ಥನೆ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ. ಪೇಶಾವರದ ಈಶಾನ್ಯಕ್ಕೆ 120 ಮೈಲು ದೂರದ ಆಫ್ಘನ್ ಗಡಿಯ ಪ್ರಕ್ಷುಬ್ಧ ಪ್ರದೇಶದಲ್ಲಿ ಈ ಸ್ಫೋಟ ಸಂಭವಿಸಿದೆ.

ಅಪ್ಪರ್ ದಿರ್ ಸ್ವಾತ್ ಕಣಿವೆಗೆ ಸಮೀಪದಲ್ಲಿದ್ದ ತಾಲಿಬಾನ್ ಉಗ್ರರನ್ನು ಅಟ್ಟಲು ಪಾಕಿಸ್ತಾನ ಸೇನೆ ಪ್ರಮುಖ ಕಾರ್ಯಾಚರಣೆಯನ್ನು ಅಲ್ಲಿ ನಡೆಸಿದೆ. ಉಗ್ರಗಾಮಿಗಳು ಪ್ರತಿದಾಳಿ ನಡೆಸಬಹುದೆಂದು ಪಾಕಿಸ್ತಾನಿ ಅಧಿಕಾರಿಗಳು ಎಚ್ಚರಿಸಿದ್ದರು.

ತಾಲಿಬಾನ್ ವಿರುದ್ಧ ಸೇನೆ ಕಾರ್ಯಾಚರಣೆ ನಡೆದಾಗಿನಿಂದ ತಾಲಿಬಾನ್ ನಡೆಸಿದ 9ನೇ ದಾಳಿ ಇದಾಗಿದ್ದು, ಇನ್ನಷ್ಟು ಸೇಡು ತೀರಿಸಿಕೊಳ್ಳುವುದಾಗಿ ಅದು ಬೆದರಿಕೆ ಹಾಕಿದೆ. ದಿರ್‌ನ ಹಯಾಗಿ ಖೇರ್ಖಿ ಮಸೀದಿಯಲ್ಲಿ ಸುಮಾರು 200 ಮಂದಿ ಗುಂಪು ಪ್ರಾರ್ಥನೆ ಸಲುವಾಗಿ ಸೇರಿದ್ದಾಗ ಶಕ್ತಿಶಾಲಿ ಸ್ಫೋಟ ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಶೂಟ್‌ಔಟ್‌ನಲ್ಲಿ ದಾವೂದ್ ಸೋದರ ಅನೀಸ್‌ಗೆ ಗಾಯ
ತಾಲಿಬಾನ್-ಪಾಕ್ ಸಂಧಾನಕಾರ ಸೂಫಿ ಬಂಧನ
ಸಂಗಾತಿಗಾಗಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಶೋಧ
ನೇಪಾಳ ವಿದೇಶಾಂಗ ಸಚಿವೆಯಾಗಿ ಸುಜಾತ ಕೊರ್ಯಾಲ
ನಾಗಸಾಕಿ ಮೇಲೆ ಅಣುಬಾಂಬ್ ಹಾಕಿದ ಪೈಲಟ್ ನಿಧನ
ಹೊಸ ಮಾರುವೇಷದಲ್ಲಿ ಜೆಯುಡಿ ಕಾರ್ಯಾಚರಣೆ