ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ದಾವೂದ್ ಜಾಲದಲ್ಲಿ ರಾಜಕಾರಣಿಗಳು, ಉದ್ಯಮಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾವೂದ್ ಜಾಲದಲ್ಲಿ ರಾಜಕಾರಣಿಗಳು, ಉದ್ಯಮಿಗಳು
ಅಂತಾರಾಷ್ಟ್ರೀಯ ಮಾಫಿಯ ಡಾನ್ ದಾವೂದ್ ಇಬ್ರಾಹಿಂ ಚಟುವಟಿಕೆಗಳ ಜಾಡು ಹಿಡಿದ ಪೊಲೀಸರನ್ನು ಬಾಂಗ್ಲಾದೇಶದ ರಾಜಕಾರಣಿಗಳು ಮತ್ತು ಉದ್ಯಮಿಗಳ ಮನೆಬಾಗಿಲಿಗೆ ತಂದುನಿಲ್ಲಿಸಿದೆ.

ಆದರೆ ದಾವೂದ್ ಜತೆ ಸಖ್ಯವಿರುವ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದು, ಕರಾಚಿ ಮತ್ತು ದುಬೈನಿಂದ ಕಾರ್ಯಾಚರಿಸುತ್ತಿರುವ ದಾವೂದ್, ತನ್ನ ಬಾಂಗ್ಲಾದೇಶ ಜಾಲ ಸುಸೂತ್ರವಾಗಿ ಸಾಗಲು ಉದ್ಯಮಿಗಳು ಮತ್ತು ರಾಜಕಾರಣಿಗಳ ವ್ಯವಹಾರ ವಿಸ್ತರಣೆಗೆ ಐಷಾರಾಮಿ ಹಣ ಖರ್ಚು ಮಾಡುತ್ತಿದ್ದಾನೆಂದು ಹೇಳಲಾಗಿದೆ.

ದಾವೂದ್ ಸಹಚರ ಅಬ್ದುರ್ ರೌಫ್ ದೌದ್ ಮರ್ಚೆಂಟ್ ತನಿಖೆಯ ವೇಳೆ ಸುಳಿವುಗಳ ಜಾಡು ಹಿಡಿದು ಪೊಲೀಸರು ಹೊರಟ ಸಂದರ್ಭದಲ್ಲಿ ತನಿಖೆಯನ್ನು ಕೈಬಿಡುವಂತೆ ಬೆದರಿಕೆಯ ಫೋನ್ ಕರೆ ಮತ್ತು ಎಸ್‌ಎಂಎಸ್ ಕಳಿಸಲಾಗಿದೆಯೆಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ತಾವು ಭಾರತೀಯ ಮೊಬೈಲ್ ನಂಬರಿನಿಂದ ಒಂದು ಕರೆ ಮತ್ತು ಬಾಂಗ್ಲಾದೇಶಿ ಸೆಲ್‌ಫೋನ್ ಸಂಖ್ಯೆಯಿಂದ ಎಸ್ಎಂಎಸ್ ಬಂದಿದ್ದು, ದಾವೂದ್ ಸಂಗಡಿಗರ ಪ್ರಕರಣವನ್ನು ನಡೆಸಬಾರದೆಂದು ಬೆದರಿಕೆ ಹಾಕಲಾಗಿದೆ.

ಬಾಲಿವುಡ್ ಸಂಗೀತ ನಿರ್ದೇಶಕ ಗುಲ್ಶನ್ ಕುಮಾರ್ ಹತ್ಯೆಗೆ ಸಂಬಂಧಪಟ್ಟಂತೆ ತಪ್ಪಿತಸ್ಥನಾಗಿರುವ ಮರ್ಚೆಂಟ್‌‌ನನ್ನು ಬಾಂಗ್ಲಾದ ಬ್ರಹ್ಮನ್‌ಬಾರಿಯ ಗ್ರಾಮದಲ್ಲಿ ಅಡಗಿದ್ದಾಗ ಹಿಡಿಯಲಾಗಿತ್ತು. ಅವನ ತನಿಖೆ ಸಂದರ್ಭದಲ್ಲಿ, ಕೆಲವು ರಾಜಕೀಯ ನಾಯಕರು ದಾವೂದ್ ಜತೆ ನಿಕಟ ಸಖ್ಯವಿದೆಯೆಂದು ಬಾಯಿಬಿಟ್ಟಿದ್ದಾನೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ತಾಲಿಬಾನ್ ವಿರುದ್ಧ ಸಿಡಿದೆದ್ದ ಬುಡಕಟ್ಟು ಜನಾಂಗ
"ತಾಲಿಬಾನಿಗಳ ವಿರುದ್ಧ ನ್ಯಾಟೊ ಗೆಲುವು ಸಾಧ್ಯವಿಲ್ಲ"
ಇರಾಕ್‌ನಲ್ಲಿ ಮಿನಿಬಾಂಬ್ ಸ್ಫೋಟಕ್ಕೆ 7 ಜನರ ಬಲಿ
ಇನ್ನೊಬ್ಬ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ
ಅಮೆರಿಕ ಪತ್ರಕರ್ತೆಯರಿಗೆ ಉ.ಕೊರಿಯ ಸೆರೆವಾಸದ ಶಿಕ್ಷೆ
ಭಾರತದ ಕಾನೂನು ಪದವಿಗೆ ಕೆನಡಾ ಮಾನ್ಯತೆ