ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ಅಂತಾರಾಷ್ಟ್ರೀಯ > ಬಾಗ್ದಾದ್ ಬಾಂಬ್ ಸ್ಫೋಟದಲ್ಲಿ 70 ಜನರ ಸಾವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಗ್ದಾದ್ ಬಾಂಬ್ ಸ್ಫೋಟದಲ್ಲಿ 70 ಜನರ ಸಾವು
ಇರಾಕಿನ ಬಾಗ್ದಾದ್‌ನ ಪೂರ್ವ ಸದರ್ ನಗರದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಬಾಂಬ್ ಸ್ಫೋಟದಲ್ಲಿ ಕನಿಷ್ಠ 70 ಜನರು ಅಸುನೀಗಿದ್ದಾರೆ. ಶಿಯಾ ಜನರ ಪ್ರಾಬಲ್ಯವಿರುವ ಮಾರುಕಟ್ಟೆ ಸ್ಥಳದಲ್ಲಿ ಬಾಂಬ್ ಸ್ಫೋಟಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದಲ್ಲಿ ಸುಮಾರು 130ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಇರಾಕ್‌ನಲ್ಲಿ ಈ ವರ್ಷ ಸಂಭವಿಸಿದ ಭೀಕರ ಬಾಂಬ್ ಸ್ಫೋಟಗಳಲ್ಲಿ ಒಂದಾಗಿದೆ.

ಇರಾಕಿನ ನಗರಗಳಿಂದ ಅಮೆರಿಕದ ಸೈನಿಕರು ನಿರ್ಗಮಿಸಲು ಒಂದು ವಾರಕ್ಕಿಂತ ಕಡಿಮೆ ಅವಧಿ ಇರುವಾಗಲೇ ಈ ದುರ್ಘಟನೆ ಸಂಭವಿಸಿದೆ.ತರಕಾರಿಗಳನ್ನು ಮಾರಲು ಮಾರುಕಟ್ಟೆಗೆ ಒಯ್ಯುತ್ತಿದ್ದ ಯಾಂತ್ರಿಕ ಗಾಡಿಯ ಅಡಿಯಲ್ಲಿ ಬಾಂಬ್ ಹುದುಗಿಸಿಡಲಾಗಿತ್ತೆಂದು ಅಧಿಕಾರಿ ತಿಳಿಸಿದ್ದಾರೆ. ಸ್ಫೋಟದ ಭಾರೀ ಸದ್ದು ಕಿವಿಗೆ ಅಪ್ಪಳಿಸಿದ ಬಳಿಕ ಬೆಂಕಿಯ ಉಂಡೆ ಗೋಚರಿಸಿತು ಎಂದು ಸ್ಫೋಟದಲ್ಲಿ ಗಾಯಗೊಂಡ ನಜೀಂ ಅಲಿ ಎಂಬ ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ.

ಸ್ಫೋಟದ ರಭಸಕ್ಕೆ ಕಾರುಗಳು ಗಾಳಿಯಲ್ಲಿ ಹಾರುತ್ತಿದ್ದವೆಂದು ಅವರು ಎಎಫ್‌ಪಿಗೆ ತಿಳಿಸಿದ್ದಾರೆ. ಸ್ಫೋಟ ಸಂಭವಿಸಿದ ಬಳಿಕದ ದೃಶ್ಯ ಭಯಾನಕವಾಗಿತ್ತೆಂದು ಸ್ಥಳೀಯ ಅಂಗಡಿ ಮಾಲೀಕ ರಾಡ್ ಲತೀಫ್ ತಿಳಿಸಿದ್ದಾರೆ.ಮಾರುಕಟ್ಟೆಯ ಅಂಗಡಿಗಳಿಗೆ ಬೆಂಕಿ ಹತ್ತಿಕೊಂಡಿತು ಮತ್ತು 600 ಮೀ.ದೂರದಲ್ಲಿ ನಿಂತಿದ್ದವರಿಗೆ ಬಾಂಬ್ ಚೂರುಗಳು ಸಿಡಿದವು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿದ್ಯಾರ್ಥಿಗಳಿಗೆ ಭರವಸೆ: ಆಸ್ಟ್ರೇಲಿಯದ ನಿಯೋಗ
'ನಾಲ್ಕು ಶಕ್ತಿಕೇಂದ್ರಗಳ ನಡುವೆ ಪಾಕ್‌ನಲ್ಲಿ ಸಂಘರ್ಷ'
ಅಣ್ವಸ್ತ್ರ ಯುದ್ಧದ ಕರಿಯ ಮೋಡಗಳು: ಉ.ಕೊರಿಯ ಎಚ್ಚರಿಕೆ
ಉತ್ತರ ಕೊರಿಯ ವಿರುದ್ಧ ಅಮೆರಿಕ ದಿಗ್ಬಂಧನ ವಿಸ್ತರಣೆ
ಕಾಯಂ ಸ್ಥಾನಕ್ಕಾಗಿ ಭಾರತಕ್ಕೆ ಬೆಂಬಲಿಸಲು ಬರ್ನ್ಸ್ ಕರೆ
ಭಾರತ-ಪಾಕ್ ಮಾತುಕತೆ ದಿನಾಂಕಕ್ಕೆ ಅಂತಿಮರೂಪ